Desktop Logo
Locations
Offers
Tickets
Rides
4 Oct, 2024
5 mins read

ವಂಡರ್‌ಲಾದಲ್ಲಿ ದಸರಾ ಕೊಡುಗೆ

​ಪ್ರಜಾವಾಣಿ ವಾರ್ತೆ
​ಪ್ರಜಾವಾಣಿ ವಾರ್ತೆ
Article-Banner-Img

ವಂಡರ್‌ಲಾದಲ್ಲಿ ದಸರಾ ಕೊಡುಗೆ
entry.png
ರಾಮನಗರ: ವಂಡರ್‌ಲಾ ಆನ್‌ಲೈನ್‌ ಟಿಕೆಟ್‌ಗೆ ದಸರಾ ಪ್ರಯುಕ್ತ ವಿಶೇಷ ಕೊಡುಗೆ ಘೋಷಿಸಲಾಗಿದೆ. ಆನ್‌ಲೈನ್‌ನಲ್ಲಿ ಎರಡು ಟಿಕೆಟ್‌ ಖರೀದಿಸಿದರೆ ಒಂದು ಟಿಕೆಟ್‌ ಉಚಿತವಾಗಿ ನೀಡಲಾಗುತ್ತದೆ. ಅ. 10ರವರೆಗೆ ಈ ಕೊಡುಗೆಗಳು ಲಭ್ಯವಿರಲಿದ್ದು, ಈ ಅವಧಿಯಲ್ಲಿ ಖರೀದಿಸಿದ ಟಿಕೆಟ್‌ಗಳು ಅ. 31ರವರೆಗೆ ಬಳಕೆಗೆ ಮಾನ್ಯವಾಗಿರುತ್ತವೆ.
 

ದಸರಾ ರಜೆಯ ಅಂಗವಾಗಿ ವಂಡರ್‌ಲಾ ಸಮಯ ಹಾಗೂ ಮೋಜಿನ ಆಟದಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಸಂಜೆ 7ರವರೆಗೆ ಪಾರ್ಕ್‌ ತೆರೆದಿರಲಿದೆ. ರೋಮಾಂಚಕ, ಅತ್ಯಾಕರ್ಷಕ ಡಿಜೆ ಪ್ರದರ್ಶನ, ಉತ್ಸಾಹಭರಿತ ಜುಂಬಾ ಸೆಷನ್‌ಗಳು, ಬೆರಗುಗೊಳಿಸುವ ಫೈರ್ ಶೋ ಪ್ರದರ್ಶನ, ವಯೊಲಿನ್ ಫ್ಯೂಶನ್ ಮತ್ತು ಲಿಕ್ವಿಡ್‌ ಡ್ರಮ್ ಪ್ರದರ್ಶನವೂ ಇರಲಿದೆ. 
 

ಸಾರ್ವಜನಿಕರು ವಂಡರ್‌ಲಾ ಆನ್‌ಲೈನ್ ಪೋರ್ಟಲ್ ಮೂಲಕ https://bookings.wonderla.com/ ನಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಬಹುದು ಬೆಂಗಳೂರು ಪಾರ್ಕ್ +91 80372 30333, +91 9945557777 ಅನ್ನು ಸಂಪರ್ಕಿಸಬಹುದು ಎಂದು ವಂಡರ್ ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ತಿಳಿಸಿದ್ದಾರೆ.
 

FOLLOW US ON :

RamangaraWonder La