5 Oct, 2024
5 mins read
Bengaluru: ವಂಡರ್‌ಲಾದಲ್ಲಿ 2 ಟಿಕೆಟ್ ಖರೀದಿಸಿದರೆ 1 ಟಿಕೆಟ್ ಫ್ರೀ
Bengaluru: ವಂಡರ್‌ಲಾದಲ್ಲಿ 2 ಟಿಕೆಟ್ ಖರೀದಿಸಿದರೆ 1 ಟಿಕೆಟ್ ಫ್ರೀ
ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ ಲಾ ದಸರಾ ಹಬ್ಬದ ಪ್ರಯುಕ್ತ ಆನ್‌ಲೈನ್‌ನಲ್ಲಿ 2 ಟಿಕೆಟ್ ಖರೀದಿಸಿದರೆ 1 ಟಿಕೆಟ್ ಉಚಿತ ಪಡೆಯುವ ಕೊಡುಗೆಯನ್ನು ಘೋಷಿಸಿದೆ.
ಈ ಕೊಡುಗೆಯು ಬೆಂಗಳೂರಿನ ವಂಡರ್ ಲಾದಲ್ಲಿ ಅ.10ರ ವರೆಗೆ ಇರಲಿದೆ. ಈ ವೇಳೆ ಖರೀದಿಸುವ ಟಿಕೆಟ್‌ಗಳು ಅ.31ರ ವರೆಗೆ ಬಳಕೆಗೆ ಮಾನ್ಯವಾಗಿರುತ್ತದೆ. ಹಬ್ಬದ ವಿಶೇಷ ಆಚರಣೆಯ ಅಂಗವಾಗಿ ಸಂಜೆ 7ವರೆಗೆ ವಂಡರ್ ಲಾ ತೆರೆದಿರಲಿದೆ. ಉತ್ಸವಗಳ ಪ್ರಯುಕ್ತ ಮನರಂಜನಾ ಕಾರ್ಯಕ್ರಮ ಗಳ ಆಯೋಜಿಸಿದೆ. ಆಕರ್ಷಕ ಡಿಜೆ ಪ್ರದರ್ಶನ, ಉತ್ಸಾಹಭರಿತ ಜುಂಬಾ ಸೆಶನ್‌ಗಳು, ಬೆರಗುಗೊಳಿಸುವ ಫೈರ್ ಶೋ ಪ್ರದರ್ಶನ ವಯೊಲಿನ್ ಫ್ಯೂಶನ್ ಜತೆಗೆ ಲಿಕ್ವಿಡ್ ಡ್ರಮ್ ಪ್ರದರ್ಶನವೂ ಇರಲಿದೆ. ಫುಡ್ ಕಾಂಬೊ 2 ಟಿಕೆಟ್‌ಗಳನ್ನು ಖರೀದಿಸಿ, 1 ಫುಡ್ ಕಾಂಬೊ ಟಿಕೆಟ್ ಪಡೆಯಬಹುದು. ಇದು ಆಟದ ಜತೆಗೆ ಊಟದ ಆನಂದವನ್ನೂ ನೀಡಲಿದೆ.
ವಂಡರ್ ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಮಾತನಾಡಿ, ದಸರಾ ಹಬ್ಬವು ನಮ್ಮ ನಾಡ ಹಬ್ಬವಾಗಿದೆ. ಈ ಸಂತೋಷದಾಯಕ ಸಂಪ್ರದಾಯದ ಭಾಗವಾಗಲು ನಾವು ಹೆಮ್ಮೆ ಪಡುತ್ತಿದ್ದೇವೆ ಎಂದರು. ಸಾರ್ವಜನಿಕರು ವಂಡರ್ ಲಾ ಆನ್ ಲೈನ್ ಪೋರ್ಟಲ್ ಮೂಲಕ https://bookings.wonderla.com/ ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು ಬೆಂಗಳೂರು ಪಾರ್ಕ್ +91 80372 30333, +91 9945557777 ಸಂಪರ್ಕಿಸಬಹುದು.